`ಲೊಡ್ಡೆ` ದ್ವಿತೀಯ ಹಂತ ಶುರು
Posted date: 23 Wed, Oct 2013 – 06:40:27 AM


ಹಾಕಿದ ಯೋಜನೆಯಂತೆ ಶ್ರಮ ವಹಿಸಿ ’ಲೊಡ್ಡೆ’ ಚಿತ್ರ ತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ ಇದೀಗ ೨೨ರಿಂದ ದ್ವಿತೀಯ ಹಂತದ ಚಿತ್ರೀಕರಣ  ಪ್ರಾರಂಭಿಸಿದೆ. ಮೈಸೂರು, ಬಲಮುರಿ, ಬೆಂಗಳೂರು, ರವಿಕಿರಣ್ ಎಸ್ಟೇಟ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿದೆ.

ಚಿತ್ರದ ಆರಂಭದಲ್ಲೇ ‘ಲೊಡ್ಡೆ’ ಕಥಾ ನಾಯಕಿ ಆಕಾಂಕ್ಷ ಪುರಿ ಅವರು ಹಗಲು ರಾತ್ರಿ ಮಳೆಯಲ್ಲಿ ನೆನೆದು ಮಳೆ ಹಾಡುಗಳಿಗೆ ಜನಪ್ರಿಯವಾದ ಜನಪ್ರಿಯ ಲೇಖಕ ಜಯಂತ್ ಕಾಯ್ಕಿಣಿ ಅವರ ‘ಬಣ್ಣದ ಹೂವಿನ ಕೊಡೆಯನ್ನು ಬಿಚ್ಚಿದ ಗಿಡಗಳು ಮಳೆಯಲ್ಲಿ....ಎಂಬ ಹಾಡಿಗೆ ಮೈಸೂರು, ಕೆ ಆರ್ ಎಸ್, ಗಗನಚುಕ್ಕಿ ಭರಚುಕ್ಕಿ, ಬಲಮುರಿ, ಕೆ ಆರ್ ಎಸ್ ನಾರ್ತ್ ಬ್ಯಾಂಕ್  ಸ್ಥಳಗಳಲ್ಲಿ ಅಭಿನಯಿಸಿ ಶಬಾಷ್ ಎನಿಸಿಕೊಂಡಿದ್ದಾರೆ.

ನಿರ್ಮಾಪಕ ಮಂಜುನಾಥ್ ಅವರು ಚಿತ್ರೀಕರಣ  ವ್ಯವಸ್ಥಿತ ರೀತಿಯಲ್ಲಿ ಜರಗುತ್ತಿರುವುದಕ್ಕೆ ಸಂತೋಷದಿಂದ ಇದ್ದಾರೆ.

‘ಲೊಡ್ಡೆ’ ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಅವರ ಚಿತ್ರ. ಶಯ್ಯಾಜಿ ಶಿಂದೆ, ಗೋಪಿನಾಥ್ ಭಟ್ (ಬಾಬ್ಜಿ) ಹಾಗೂ ಇತರರು ಪಾತ್ರವರ್ಗದಲ್ಲಿ ಇರುವ ಚಿತ್ರ.

ತಿರುಮಲಾ ಡೆವಲಪರ್ಸ್ ಅರ್ಪಿಸುವ ಉಲ್ಲಾಸ್ ಸಿನೆಮಾದ ಪ್ರಥಮ ಕಾಣಿಕೆ ‘ಲೊಡ್ಡೆ’ ಕಥೆ ಹಾಗೂ ಸಂಭಾಷಣೆ ಎಂ ಎಸ್ ಶ್ರೀನಾಥ್ ಅವರದು. ಇವರು ರಾಂಬೋ ಹಾಗೂ ವಿಕ್ಟರಿ ಚಿತ್ರಗಳಿಗೆ ನಿರ್ದೇಶನ ಹಾಗೂ ಕಥೆ ಒದಗಿಸಿರುವವರು. ಚಿತ್ರಕಥೆ ಹಾಗೂ ನಿರ್ದೇಶನವನ್ನು ಎಸ್ ವಿ ಸುರೇಶ್ ಅವರು ಮಾಡುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed